Banna bannada kanasu……….:)

।।ಪಲ್ಲವಿ।।

 

ಬಣ್ಣಬಣ್ಣದ ಕನಸುಗಳು ನನ್ನ ಮನದಲ್ಲಿ…

ಬಣ್ಣಿಸಲಾಗದ ನೆನಪಿನ ಮಜಲುಗಳು ನನ್ನ ಹೃದಯದಲ್ಲಿ….

ನೀ ಕಾರಣವಾದೆ ನನ್ನಲ್ಲಿ ಆಗಿರುವ ಈ ಕಲರವಕೆ..

ನಾ ಸಾರಥಿಯಾಗುವೆ  ನಿನ್ನ ಮನದ ಅಂಧದ ರಥಕೆ..

ನಂಬು ಬಾ ನನ್ನ, ನಂಬಿರುವೆ ನಾ ನಿನ್ನ…!!!!

 

।।ಚರಣ೧।।

 

ಮೊದಲ ಭಾರಿಗೆ ನನ್ನಲಿ ನಾ ನಗುತಿರುವೆ…

ಮೊದಲಾಗಿದೆ ಪ್ರೀತಿ ಎಂದು,ನನ್ನ ಜೊತೆ ನಾ ಮಾತಾಡಿರುವೆ..

ಮರೆಯಲಾರೆ ಕನಸಲೂ ನಿನ್ನ…!!

ಮಣ್ಣಲಿ ಸೇರುವೆ ಮರೆತರೆ ನೀ ನನ್ನ..!!

ನಂಬು ಬಾ ನನ್ನ, ನಂಬಿರುವೆ ನಾ ನಿನ್ನ…!!!!            ।।ಪಲ್ಲವಿ।।

 

।।ಚರಣ೨।।

 

ಕನಸಲಿ ನಮ್ಮಿಬ್ಬರ ಬಾಳನು ಕಟ್ಟಿರುವೆ…

ಅದು ನನಸಾಗಲೆಂದು ದೇವರಲ್ಲಿ ಪ್ರಾರ್ಥಿಸುತಿರುವೆ..

ನನ್ನ ಪ್ರೀತಿ ಎಂದೆಂದೂ ಅಮರ…

ಮಾಡುವ ಬಾ ಇಬ್ಬರು ಸೇರಿ ನಮ್ಮೀ ಪ್ರೀತಿಯ ಅಜರಾಮರ…

ನಂಬು ಬಾ ನನ್ನ, ನಂಬಿರುವೆ ನಾ ನಿನ್ನ…!!!!

 

।।ಪಲ್ಲವಿ।।

 

ಬಣ್ಣಬಣ್ಣದ ಕನಸುಗಳು ನನ್ನ ಮನದಲ್ಲಿ…

ಬಣ್ಣಿಸಲಾಗದ ನೆನಪಿನ ಮಜಲುಗಳು ನನ್ನ ಹೃದಯದಲ್ಲಿ….

ನೀ ಕಾರಣವಾದೆ ನನ್ನಲ್ಲಿ ಆಗಿರುವ ಈ ಕಳರವಕೆ..

ನಾ ಸಾರಥಿಯಾಗುವೆ  ನಿನ್ನ ಮನದ ಅಂಧದ ರಥಕೆ..

ನಂಬು ಬಾ ನನ್ನ, ನಂಬಿರುವೆ ನಾ ನಿನ್ನ…!!!!

 

 

 

Puttu