ನೀ ದೂರ ಸರಿದೆ ನನ್ನ ಬಾಳಿಂದ…!!!!

।।ಪಲ್ಲವಿ।।
ನೀ ದೂರ ಸರಿದೆ ನನ್ನ ಬಾಳಿಂದ,
ಕಲ್ಪನೆಗೆ ನಿಲುಕದ ಹಾಗೆ……
ಬರಿ ಕಣ್ಣೀರೆ ಉಳಿಸಿದೆ ನನಗೆ,
ತಳ್ಳುತ ನನ್ನ ಕತ್ತಲೆಯ ಕಡೆಗೆ….
ಬಾಳು ನೀ ಎಂದೆಂದೂ ಸಂತೋಷದಲ್ಲಿ…
ಕಳೆಯುವೆ ನನ್ನ ಜೀವನವ  ನಿನ್ನ ನೆನಪಲ್ಲಿ…….
 
।।ಚರಣ ೧।।
ನಾವಿಬ್ಬರು ಹರುಷದಿ ಕಳೆದ ಆ ಕ್ಷಣಗಳು,
ಕಾಡುತಿವೆ ನನ್ನ ಮನದಲ್ಲಿ….
ನೀ ಬಾಷೆಯ ಕೊಟ್ಟು ಮರೆತ ಈ ದಿನ,
ಬಾರವೆನಿಸಿದೆ ನನ್ನ ಹೃದಯದಲ್ಲಿ…
ಆದರು ನಾ ಬಾಳುವೆ,
ಏಕೆಂದರೆ ನೀ ನೆನಪಲ್ಲೇ ನನ್ನ ಕಾಡುವೆ….   ।।ಪಲ್ಲವಿ।।
 
।।ಚರಣ ೨।।
ಒಂಟಿ ಹಕ್ಕಿಯಾಗಿ,ಒಂಟಿತನದ ಸಾರಥಿಯಾಗಿ,
ನಬ್ಬಿಬ್ಬರ  ಪ್ರೀತಿಯ ಸಾರುವೆ…
ನಾವಿಬ್ಬರು ಕಳೆದ ಕ್ಷಣಗಳ ಗುರುತಾಗಿ,
ವರ್ಣನೆಯ ಗೋಪುರ ಕಟ್ಟುವೆ…
ಏಕೆಂದರೆ, ನೀನೆ ನನ್ನ ಹೃದಯದ ಒಡತಿ,
ನೀನೆ ನನ್ನ ಬಾಳಿನ ಗೆಳತಿ…….               
 
।।ಪಲ್ಲವಿ।।
ನೀ ದೂರ ಸರಿದೆ ನನ್ನ ಬಾಳಿಂದ,
ಕಲ್ಪನೆಗೆ ನಿಲುಕದ ಹಾಗೆ……
ಬರಿ ಕಣ್ಣೀರೆ ಉಳಿಸಿದೆ ನನಗೆ,
ತಳ್ಳುತ ನನ್ನ ಕತ್ತಲೆಯ ಕಡೆಗೆ….
ಬಾಳು ನೀ ಎಂದೆಂದೂ ಸಂತೋಷದಲ್ಲಿ…
ಕಳೆಯುವೆ ನನ್ನ ಜೀವನವ  ನಿನ್ನ ನೆನಪಲ್ಲಿ…….

ಸವಿಯ ನೆನಪಲ್ಲಿ ನಿನ್ನಿರಿಸಿ…..

||ಪಲ್ಲವಿ।।
 
ಬಣ್ಣ ಮಾಸಿದಂತೆ,
ಬಾಳಲಿ ಕತ್ತಲೆ ಆವರಿಸಿದಂತೆ,
ಕನಸಾಗಿದೆ ಇಂದು ನನಗೆ….
ಏಕೋ ಏನೋ ಭಯವಾಗಿದೆ ನನ್ನ ಮನಕೆ…
ಈ ಜನ್ಮಕು,ಮರು ಜನ್ಮಕೂ ನೀನೆ ನನ್ನ ಉಸಿರು..
ಓ ಮನವೇ ಮಾತಾಡು,ನಿನ್ನ ಮೌನವ ಮುರಿದು…..
 
।।ಚರಣ ೧।
ತಣ್ಣನೆಯ ತುಸು ಗಾಳಿ ನೆನಪಿಸಿದೆ ನಿನ್ನ,
ಸವಿನೆನಪಿನ ಹನಿ ಎಬ್ಬಿಸಿದೆ ಇಂದು ನನ್ನ…
ಚಲಿಸುತಿದೆ ನಿನ್ನ ಬಿಂಬ ಕಣ್ಣೆದುರು,
ಅದನು ಹಿಡಿಯಲೆತ್ನಿಸಿ ಸೋತಿದೆ ನನ್ನ ಮನ ನಿನ್ನೆದುರು…
ಕಾರಣವ ಹೇಳು ಬಾ,ನನ್ನ ಕಣ್ಣೀರ ಹೊರೆಸು ಬಾ….                       ।।ಪಲ್ಲವಿ।।
 
।।ಚರಣ ೨।।
 
ಆ ನಿನ್ನ ಪುಟ್ಟ ಮೊಗವ ನಾ ಹೇಗೆ ಮರೆಯಲಿ,
ನಾವಿಬ್ಬರು ಕಳೆದ ಆ ದಿನಗಳ ನಾ ಹೇಗೆ ಬಣ್ಣಿಸಲಿ…
ನೆನಪಿನ ಮಜಲಲಿ ನಾ ಮನೆಮಾಡಿರುವೆ,
ಅದರಲ್ಲಿ ನಿನ್ನಿರಿಸಿ ಪ್ರೀತಿಯ ಸವಿಯ ಸವೆಯುತಿರುವೆ…
ಕಾದಿರುವೆ ನಾ,ಕೊನೆಯವರೆಗೂ ಕಾಯುತಿರುವೆ ನಾ…
 
||ಪಲ್ಲವಿ।।
 
ಬಣ್ಣ ಮಾಸಿದಂತೆ,
ಬಾಳಲಿ ಕತ್ತಲೆ ಆವರಿಸಿದಂತೆ,
ಕನಸಾಗಿದೆ ಇಂದು ನನಗೆ….
ಏಕೋ ಏನೋ ಭಯವಾಗಿದೆ ನನ್ನ ಮನಕೆ…
ಈ ಜನ್ಮಕು,ಮರು ಜನ್ಮಕೂ ನೀನೆ ನನ್ನ ಉಸಿರು..
ಓ ಮನವೇ ಮಾತಾಡು,ನಿನ್ನ ಮೌನವ ಮುರಿದು…..
                                                                     —-ಪುಟ್ಟು