Home » Uncategorized » ಸವಿಯ ನೆನಪಲ್ಲಿ ನಿನ್ನಿರಿಸಿ…..

ಸವಿಯ ನೆನಪಲ್ಲಿ ನಿನ್ನಿರಿಸಿ…..

||ಪಲ್ಲವಿ।।
 
ಬಣ್ಣ ಮಾಸಿದಂತೆ,
ಬಾಳಲಿ ಕತ್ತಲೆ ಆವರಿಸಿದಂತೆ,
ಕನಸಾಗಿದೆ ಇಂದು ನನಗೆ….
ಏಕೋ ಏನೋ ಭಯವಾಗಿದೆ ನನ್ನ ಮನಕೆ…
ಈ ಜನ್ಮಕು,ಮರು ಜನ್ಮಕೂ ನೀನೆ ನನ್ನ ಉಸಿರು..
ಓ ಮನವೇ ಮಾತಾಡು,ನಿನ್ನ ಮೌನವ ಮುರಿದು…..
 
।।ಚರಣ ೧।
ತಣ್ಣನೆಯ ತುಸು ಗಾಳಿ ನೆನಪಿಸಿದೆ ನಿನ್ನ,
ಸವಿನೆನಪಿನ ಹನಿ ಎಬ್ಬಿಸಿದೆ ಇಂದು ನನ್ನ…
ಚಲಿಸುತಿದೆ ನಿನ್ನ ಬಿಂಬ ಕಣ್ಣೆದುರು,
ಅದನು ಹಿಡಿಯಲೆತ್ನಿಸಿ ಸೋತಿದೆ ನನ್ನ ಮನ ನಿನ್ನೆದುರು…
ಕಾರಣವ ಹೇಳು ಬಾ,ನನ್ನ ಕಣ್ಣೀರ ಹೊರೆಸು ಬಾ….                       ।।ಪಲ್ಲವಿ।।
 
।।ಚರಣ ೨।।
 
ಆ ನಿನ್ನ ಪುಟ್ಟ ಮೊಗವ ನಾ ಹೇಗೆ ಮರೆಯಲಿ,
ನಾವಿಬ್ಬರು ಕಳೆದ ಆ ದಿನಗಳ ನಾ ಹೇಗೆ ಬಣ್ಣಿಸಲಿ…
ನೆನಪಿನ ಮಜಲಲಿ ನಾ ಮನೆಮಾಡಿರುವೆ,
ಅದರಲ್ಲಿ ನಿನ್ನಿರಿಸಿ ಪ್ರೀತಿಯ ಸವಿಯ ಸವೆಯುತಿರುವೆ…
ಕಾದಿರುವೆ ನಾ,ಕೊನೆಯವರೆಗೂ ಕಾಯುತಿರುವೆ ನಾ…
 
||ಪಲ್ಲವಿ।।
 
ಬಣ್ಣ ಮಾಸಿದಂತೆ,
ಬಾಳಲಿ ಕತ್ತಲೆ ಆವರಿಸಿದಂತೆ,
ಕನಸಾಗಿದೆ ಇಂದು ನನಗೆ….
ಏಕೋ ಏನೋ ಭಯವಾಗಿದೆ ನನ್ನ ಮನಕೆ…
ಈ ಜನ್ಮಕು,ಮರು ಜನ್ಮಕೂ ನೀನೆ ನನ್ನ ಉಸಿರು..
ಓ ಮನವೇ ಮಾತಾಡು,ನಿನ್ನ ಮೌನವ ಮುರಿದು…..
                                                                     —-ಪುಟ್ಟು 

7 thoughts on “ಸವಿಯ ನೆನಪಲ್ಲಿ ನಿನ್ನಿರಿಸಿ…..

  1. Hey Puttu,
    I liked it, “ಸವಿಯ ನೆನಪಲ್ಲಿ ನಿನ್ನಿರಿಸಿ” is a good song.
    You also sing right ? Composing this song will be a good idea.
    It reminds me some momemnts of my life.

Leave a comment